ಮೈಸೂರು ವಿವಿಯಲ್ಲಿ ಉದ್ಯೋಗಾವಕಾಶ
ಹುದ್ದೆಗಳ ಸಂಖ್ಯೆ : 205ಮೈಸೂರು ವಿಶ್ವವಿದ್ಯಾಲಯವುವಿವಿಧ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರಗಳು ಮತ್ತು ಘಟಕ ಕಾಲೇಜುಗಳಲ್ಲಿ ಇರುವ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ(ಸ್ನಾತಕೋತ್ತರ) ಮತ್ತು ಸಹಾಯಕ ಪ್ರಾಧ್ಯಾಪಕ(ಯುಜಿ) ಹುದ್ದೆಗಳು ಖಾಲಿ ಇವೆ.
ಇವುಗಳಲ್ಲಿ 55 ಬ್ಯಾಕ್ಲಾಗ್ ಮತ್ತು 150 ಖಾಯಂ ಹುದ್ದೆಗಳಾಗಿವೆ.ಹುದ್ದೆಗಳ ವಿವರ
ಬ್ಯಾಕ್ಲಾಗ್ ಹುದ್ದೆ: ಪಿಜಿ ವಿಭಾಗದಲ್ಲಿ ಕನ್ನಡ, ಅರ್ಥಶಾಸ್ತ್ರ, ಬಾಟನಿ, ಗಣಿತ, ಕಾನೂನು ಸೇರಿದಂತೆ ಸುಮಾರು 29 ವಿಷಯಗಳಲ್ಲಿ ಖಾಲಿ ಇರುವ 39 ಹುದ್ದೆಗಳಿಗೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮಂಡ್ಯ ಮತ್ತು ಹಾಸನ, ಮಾನಸಗಂಗೋತ್ರಿ ಮೈಸೂರು ಮುಂತಾದ ಕಡೆ ಇರುವ ಪಿಜಿ ವಿಭಾಗಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡಬೇಕಿದೆ.
ವಿವಿಧ ಘಟಕ ಕಾಲೇಜುಗಳಲ್ಲಿ ಸಂಸ್ಕೃತ, ತರ್ಕಶಾಸ್ತ್ರ, ಫಿಸಿಕ್ಸ್ ಸೇರಿದಂತೆ ಸುಮಾರು 12 ವಿಭಾಗಗಳಲ್ಲಿ 16 ಬ್ಯಾಕ್ಲಾಗ್ ಹುದ್ದೆಗಳಿವೆ.
ಖಾಯಂ ಹುದ್ದೆ: ಮಂಡ್ಯ ಮತ್ತು ಹಾಸನ, ಮಾನಸಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ವಿಭಾಗ/ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರೊಫೆಸರ್-20, ಅಸೋಸಿಯೇಟ್ ಪ್ರೊಫೆಸರ್-43 ಮತ್ತು ಅಸಿಸ್ಟೆಂಟ್ ಪ್ರೊಫೆಸರ್(ಪಿಜಿ)-44 ಹುದ್ದೆಗಳು ಸೇರಿದಂತೆ ಒಟ್ಟು 107 ಹುದ್ದೆಗಳಿವೆ.
ಉಳಿದಂತೆ ವಿವಿಧ ಘಟಕ ಕಾಲೇಜುಗಳಲ್ಲಿ 43 ಅಸಿಸ್ಟೆಂಟ್ ಪ್ರೊಫೆಸರ್(ಯುಜಿ) ಹುದ್ದೆಗಳಿವೆ.
ಶೈಕ್ಷಣಿಕ ಅರ್ಹತೆ ಪ್ರೊಫೆಸರ್: ಸಂಬಂಧಪಟ್ಟ ವಿಷಯಗಳಲ್ಲಿ ಪಿಎಚ್.ಡಿ ಪದವಿ, 10 ವರ್ಷಗಳ ಬೋಧನಾ/ಸಂಶೋಧನಾ ಅನುಭವ, 10 ಪಬ್ಲಿಕೇಷನ್ಗಳಲ್ಲಿ ಪುಸ್ತಕ/ಸಂಶೋಧನಾ ಬರಹ ಪ್ರಕಟ ಇತ್ಯಾದಿ.
ಅಸೋಸಿಯೇಟ್ ಪ್ರೊಫೆಸರ್: ಪಿಎಚ್.ಡಿ, ಸ್ನಾತಕೋತ್ತರ ಪದವಿ, ಕನಿಷ್ಠ 8 ವರ್ಷಗಳ ಬೋಧನಾ/ಸಂಶೋಧನಾ ಅನುಭವ ಇತ್ಯಾದಿ.
ಅಸಿಸ್ಟೆಂಟ್ ಪ್ರೊಫೆಸರ್: ಸ್ನಾತಕೋತ್ತರ ಪದವಿ, ನೆಟ್ ಎಗ್ಸಾಂ ಉತ್ತೀರ್ಣ ಇತ್ಯಾದಿ.
ಗಮನಿಸಿ: ಕೆಲವು ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಗಳು ಭಿನ್ನವಾಗಿದ್ದು, ಸಂಪೂರ್ಣ ಮಾಹಿತಿಯನ್ನು ಮೈಸೂರು ವಿವಿಯವೆಬ್ಸೈಟ್ನಿಂದಲೇ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವುದು ಹೇಗೆ?ಆಸಕ್ತ ಅಭ್ಯರ್ಥಿಗಳು ಒಟ್ಟು 10 ಅರ್ಜಿ ಪ್ರತಿಗಳನ್ನು ಅಂಚೆ ಮೂಲಕ ಕಳುಹಿಸಿಕೊಡಬೇಕು.
ಅರ್ಜಿ ಶುಲ್ಕ: 2 ಸಾವಿರ ರೂ., ಎಸ್ಸಿ/ಎಸ್ಟಿಗೆ 1000 ರೂ. ನಿಗದಿಪಡಿಸಲಾಗಿದೆ.ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಕಳುಹಿಸಿಕೊಡಬೇಕು.
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 59 ವರ್ಷ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತಿಯೊಂದು ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.ಆಯ್ಕೆಯಾದ ಅಭ್ಯರ್ಥಿಗಳ ವಿವರವನ್ನು ವಿವಿ ವೆಬ್ಸೈಟ್ನಲ್ಲಿಪ್ರಕಟಿಸಲಾಗುತ್ತದೆ. ಪ್ರತ್ಯೇಕವಾಗಿ ವಿವರ ಕಳುಹಿಸಿಕೊಡಲಾಗುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯವುಪ್ರಕಟಿಸಿದೆ.ಅರ್ಜಿ ಸಲ್ಲಿಸುವುದು ಹೇಗೆ?:
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 27, 2016ಹೆಚ್ಚಿನ ಮಾಹಿತಿಗೆ ವೆಬ್ವಿಳಾಸ:
www.uni-mysore.ac.in
ಪುಟಗಳು
▼