ಪುಟಗಳು

Monday, July 04, 2016

ಇಸ್ರೊದಲ್ಲಿದೆ ಉದ್ಯೋಗಾವಕಾಶ

* ಟೆಕ್ನಿಷಿಯನ್ ಮತ್ತು ಫೈರ್ಮೆನ್ ಹುದ್ದೆಗಳು * ಎಸ್ಎಸ್ಎಲ್ಸಿ ಮತ್ತು ಐಟಿಐ ಶಿಕ್ಷಣ ಪಡೆದವರಿಗೆ ಅವಕಾಶ ಒಟ್ಟು ಹುದ್ದೆ: 53 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಸತೀಶ್ ಧವನ್ ಸ್ಪೇಸ್ ಸೆಂಟರ್ ಎಸ್ಎಚ್ಎಆರ್ನಲ್ಲಿ ವಿವಿಧ ಉದ್ಯೋಗಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದು ಇಸ್ರೊದ ಪ್ರಮುಖ ರಾಕೆಟ್ ಉಡಾವಣಾ ನೆಲೆಯಾಗಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿದೆ. ಸಾಲಿಡ್ ಪ್ರೊಪೆಲೆಂಟ್ ಪ್ರೊಡಕ್ಷನ್, ರಾಕೆಟ್ ಮೋಟಾರ್ ಸ್ಟಾಟಿಕ್ ಟೆಸ್ಟ್ ಫೆಸಿಲಿಟಿ, ರಾಕೆಟ್ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ವಿವಿಧ ರಾಕೆಟ್ಗಳನ್ನು ಉಡಾಯಣಾ ಮಾಡುವ ಲಾಂಚಿಂಗ್ ಫೆಸಿಲಿಟಿ ಇಲ್ಲಿದೆ.

ಹುದ್ದೆಗಳ ವಿವರ : ಟೆಕ್ನಿಷಿಯನ್-ಬಿ ವಿಭಾಗದಲ್ಲಿ ಡೀಸೆಲ್ ಮೆಕ್ಯಾನಿಕ್-1, ಕಾರ್ಪೆಂಟರ್-1, ಡ್ರಾಫ್ಟ್ಸ್ಮೆನ್-2, ಎಲೆಕ್ಟ್ರಿಕಲ್ ಟೆಕ್ನಿಷಿಯನ್-3, ಎಲೆಕ್ಟ್ರಾನಿಕ್ ಮೆಕ್ಯಾನಿಕ್-8, ಫಿಟ್ಟರ್-18, ಮೆಷಿನಿಸ್ಟ್-1, ಪ್ಲಂಬರ್-1, ಪಂಪ್ ಅಪರೇಟರ್ ಕಂ ಮೆಕ್ಯಾನಿಕ್-02, ರೆಫ್ರಿಜರೇಷನ್ ಮತ್ತು ಏರ್ ಕಂಡಿಷನಿಂಗ್ ಟೆಕ್ನಿಷಿಯನ್ 03, ಟರ್ನರ್-1, ಫಿಟ್ಟರ್(ಅಂಡಮಾನ್ ಮತ್ತು ನಿಕೊಬಾರ್ ವಿಭಾಗಕ್ಕೆ)-1 ಹುದ್ದೆಗಳಿವೆ. ಫೈರ್ ಮೆನ್ ವಿಭಾಗದಲ್ಲಿ 11 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ :

ಎಲ್ಲಾ ಟೆಕ್ನಿಷಿಯನ್ ಹುದ್ದೆಗಳಿಗೂ ಅಭ್ಯರ್ಥಿಗಳು ಎಸ್ಎಸ್ಎಲ್ಸಿ/ಎಸ್ಎಸ್ಸಿ ಪಾಸಾಗಿರಬೇಕಾಗಿರುವುದು ಕಡ್ಡಾಯ. ಸಂಬಂಧಿತ ಟ್ರೇಡ್ಗಳಲ್ಲಿ ಐಟಿಐ/ಎನ್ಟಿಸಿ/ಎನ್ಎಸಿ ಸರ್ಟಿಫಿಕೇಟ್ ಪಡೆದಿರಬೇಕು. ಡೀಸೆಲ್ ಮೆಕ್ಯಾನಿಕ್ ಹುದ್ದೆಗೆ ಈ ಮೇಲಿನ ಶೈಕ್ಷಣಿಕ ಅರ್ಹತೆಯೊಂದಿಗೆ ಹೆವಿ ವಾಹನಗಳ ಡ್ರೈವಿಂಗ್ ಲೈಸನ್ಸ್ ಪಡೆದಿರಬೇಕು. ಫೈರ್ಮೆನ್ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಶೈಕ್ಷಣಿಕ ಅರ್ಹತೆ ಜೊತೆಗೆ ಫಿಸಿಕಲ್ ಫಿಟ್ನೆಸ್ ಮತ್ತು ಎಂಡೊರ್ಸ್ಮೆಂಟ್ ಟೆಸ್ಟ್ ಪಾಸ್ ಆಗಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ವಯೋಮಿತಿ :

ಟೆಕ್ನಿಷಿಯನ್ ವಿಭಾಗದ ಹುದ್ದೆಗಳಿಗೆ 18ರಿಂದ 35 ವರ್ಷ ಮತ್ತು ಫೈರ್ಮೆನ್-ಎ ವಿಭಾಗದ ಹುದ್ದೆಗಳಿಗೆ 18-25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ನೇಮಕ ಹೇಗೆ?

ಲಿಖಿತ ಪರೀಕ್ಷೆ/ಕೌಶಲ ಪರೀಕ್ಷೆ/ಎಂಡೊರ್ಸ್ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಫೈರ್ಮೆನ್ ಹುದ್ದೆಗೆ ಫಿಸಿಕಲ್ ಫಿಟ್ನೆಸ್ ಮತ್ತು ಎಂಡೊರ್ಸ್ಮೆಂಟ್ ಟೆಸ್ಟ್ ನಡೆಸಲಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವಲ್ಲಿ ಅನುಸರಿಸಬೇಕಾದ ಕ್ರಮಗಳು, ಅರ್ಜಿ ಶುಲ್ಕ, ಹುದ್ದೆಗಳ ವರ್ಗೀಕರಣ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸತೀಶ್ ಧವನ್ ಸ್ಪೇಸ್ ಸೆಂಟರ್ನ ವೆಬ್ಸೈಟಿನಿಂದ ಪಡೆಯಬಹುದು.

ಕ್ವಿಕ್ ಲುಕ್

ಅರ್ಜಿ ಸಲ್ಲಿಸುವುದು ಹೇಗೆ?:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 21, 2016 ಹೆಚ್ಚಿನ ಮಾಹಿತಿಗೆ ವೆಬ್ ವಿಳಾಸ: http://sdsc.shar.gov.in

ಶಾಸನಬದ್ಧ ಅಧಿಕಾರವಿಲ್ಲದ ಕೆಇಎಗೆ ನೇಮಕಾತಿ ಹೊಣೆ
ರಾಜೀವ ಹೆಗಡೆ ಬೆ೦ಗಳೂರು
ಕನಾ೯ಟಕ ಲೋಕಸೇವಾ ಆಯೋಗಕ್ಕೆ ಚಿಕಿತ್ಸೆ ಮಾಡಲಾಗದ ರಾಜ್ಯ ಸಕಾ೯ರ ಕನಾ೯ಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವನ್ನು ಅಕ್ರಮದ ಗೂಡನ್ನಾಗಿಸಲು ವೇದಿಕೆ ಸೃಷ್ಟಿ ಮಾಡುತ್ತಿದೆ. ಸಾ೦ವಿಧಾನಿಕ ಸ್ಥಾನಮಾನ ಹೊ೦ದಿರುವ ಕೆಪಿಎಸ್‍ಸಿ ಸುಧಾರಣೆ ಮಾಡಲಾಗದ ರಾಜ್ಯ ಸಕಾ೯ರ, ಅದಕ್ಷ ಅಧ್ಯಕ್ಷರು ಹಾಗೂ ಸದಸ್ಯರ ಶಿಫಾ ರಸು ಮೂಲಕ ತನ್ನ ನಿಲುವು ಪ್ರದಶಿ೯ಸಿದೆ. ಆದರೆ ಸಾ೦ವಿಧಾನಿಕ ಸ್ಥಾನಮಾನ ಅಥವಾ ಕಾಯ್ದೆಯ ರಕ್ಷಣೆಯೂ ಇಲ್ಲದ ಕೆಇಎಯನ್ನು ಸಕಾ೯ರಿ ನೌಕರರ ನೇಮಕದ ಪ್ರಾಧಿಕಾರವನ್ನಾಗಿ ಮಾಡ ಹೊರಟಿರುವುದು ಅಪಾಯದ ಮುನ್ಸೂಚನೆಯಾಗಿದೆ.
   ಕನಾ೯ಟಕ ಸ೦ಘಸ೦ಸ್ಥೆಗಳ ನೋ೦ದಣಿ ಕಾಯ್ದೆ-1960ರ ವ್ಯಾಪ್ತಿಯಲ್ಲಿ ಕನಾ೯ಟಕ ಪರೀಕ್ಷಾ ಪ್ರಾಧಿಕಾರವನ್ನು 1994ರಲ್ಲಿ ರಚಿಸಲಾಗಿದೆ. ರಾಜ್ಯದಲ್ಲಿರುವ ವೃತ್ತಿ ಶಿಕ್ಷಣ ಸ೦ಸ್ಥೆಗಳಿಗೆ ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾಥಿ೯ಗಳಿಗೆ ಸ್ಪಧಾ೯ತ್ಮಕ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಮೂರು ವಷ೯ಗಳಿ೦ದ ಪ್ರಾಧಿಕಾರವು ಯಾವುದೇ ಕಾಯ್ದೆ ಅಥವಾ ಶಾಸನಬದ್ಧ ಅಧಿಕಾರವಿಲ್ಲದ ಕೆಲಸವನ್ನು ಮಾಡುತ್ತಿದೆ.
   ಉನ್ನತ ಶಿಕ್ಷಣ ಇಲಾಖೆಗೆ ಉಪನ್ಯಾಸಕರ ನೇಮಕದಿ೦ದ ಆರ೦ಭವಾದ ಚಾಳಿಯು, ಈಗ ಶಿಕ್ಷಣ, ಆರೋಗ್ಯ ಇಲಾಖೆಯ ನೇರ ನೇಮಕದಲ್ಲೂ ಮು೦ದುವರಿದಿದೆ. ಇದಕ್ಕೆ ಹೊಸ ಸೇಪ೯ಡೆಯೆ೦ದರೆ ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿ ಹಾಗೂ ಕಾಯ೯ದಶಿ೯ಗಳ ನೇಮಕ.
   ಪ್ರಾಧಿಕಾರವೆಷ್ಟು ಸುರಕ್ಷಿತ?: ಕೆಪಿಎಸ್‍ಸಿ ಅಕ್ರಮಗಳ ಸ೦ತೆಯಾಗಿದೆ ಎ೦ಬ ಕಾರಣಕ್ಕೆ ಎಲ್ಲ ಇಲಾಖೆಗಳು ನೇಮಕ ಪ್ರಕ್ರಿಯೆಗೆ ಪ್ರಾಧಿಕಾರದತ್ತ ನೋಡುತ್ತಿವೆ. ಆದರೆ ಕೆಪಿಎಸ್‍ಸಿಯಲ್ಲಿ ಇಲ್ಲದಿರುವುದು ಪ್ರಾಧಿಕಾರದಲ್ಲಿ ಏನಿದೆ ಎ೦ದು ಕಾಯ್ದೆ ಪರಿಶೀಲಿಸಿದಾಗ ಆಯೋಗಕ್ಕಿ೦ತ ಇದು ಜಾಳಾಗಿರುವುದು ಕ೦ಡುಬರುತ್ತದೆ. ಕೆಪಿಎಸ್‍ಸಿ ಅಕ್ರಮ ತಡೆಗೆ ಪಿ.ಸಿ.ಹೋಟಾ ಸಮಿತಿ ನೀಡಿದ್ದ ಶಿಫಾ ರಸುಗಳು ಪ್ರಾಧಿಕಾರಕ್ಕೂ ಅನ್ವಯವಾಗಲೇಬೇಕು. ಏಕೆ೦ದರೆ ಅಲ್ಲಿನ ನೇಮಕ ಪ್ರಕ್ರಿಯೆ ಇಲ್ಲಿ ಆರ೦ಭೀಸಿದರೆ, ಗುಣಮಟ್ಟದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ರಾಜ್ಯ ಸಕಾ೯ರವು ಇ೦ತಹ ಗುರುತರ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೆ ವಹಿಸುವಾಗ ಇದ್ಯಾವು