ಪುಟಗಳು

Saturday, October 01, 2016

ಮರೆಯಲಾಗದ ಮಹಾನುಭಾವರು ಶಾಸ್ತ್ರೀಜಿ & ಗಾಂಧೀಜಿ:~

ಇವರಿಬ್ಬರೂ ಹುಟ್ಟಿದ ತಿಂಗಳು ಮತ್ತು ದಿನಾಂಕ ಒಂದೇ(ಅಕ್ಟೋಬರ್.2)

*ಇವರಿಬ್ಬರ ಹೆಸರುಗಳೂ
ಅವು ಅವರ ಮೂಲ ಹೆಸರುಗಳಲ್ಲ.!!
(ಗಾಂಧೀಜಿ =ಮೋಹನದಾಸ, ಶಾಸ್ತ್ರೀಜಿ=ಲಾಲ್ ಬಹಾದ್ದೂರ್ ಶ್ರೀವಾತ್ಸವ)

*ಇವರಿಬ್ಬರೂ ಮರಣಿಸಿದ ತಿಂಗಳು ಕೂಡಾ ಒಂದೇ (ಜನೇವರಿ).

*ಗಾಂಧೀಜಿಯವರು ರಾಷ್ಟ್ರದ 'ಪ್ರಧಾನ' ವ್ಯಕ್ತಿಯಾದರೆ,
ಶಾಸ್ತ್ರೀಜಿಯವರು ರಾಷ್ಟ್ರದ 'ಪ್ರಧಾನಿ' ವ್ಯಕ್ತಿ. !!

*ದೇಶದ ಜನರ ಕಷ್ಟವನ್ನು ಕಂಡು ಗಾಂಧೀಜಿಯವರು
'ಆಡಂಬರದ ವಸ್ತ್ರ' ಹೊಂದಿರಲಿಲ್ಲ,
ಶಾಸ್ತ್ರೀಜಿಯವರು 'ಸ್ವಂತ ವಸತಿ'(ಮನೆ) ಹೊಂದಿರಲಿಲ್ಲ.

*ದೇಶದ ಜನರಿಗೆ 'ಆಹಾರ ಕೊಡಲು'
ಶಾಸ್ತ್ರೀಜಿ ಉಪವಾಸವಿದ್ದರೆ,
ದೇಶಕ್ಕೆ 'ಸ್ವಾತಂತ್ರ್ಯ ತಂದು ಕೊಡಲು
ಗಾಂಧೀಜಿ ಉಪವಾಸ ಮಾಡುತ್ತಿದ್ದರು.

*ಒಬ್ಬರು 'ರಾಷ್ಟಪಿತ',
ಇನ್ನೊಬ್ಬರು 'ರಾಷ್ಟ್ರಸುತ.'

*ಇವರಿಬ್ಬರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಹಾಗೂ ಜೀವನವನ್ನು ಮುಡುಪಾಗಿಟ್ಟ ಮಹಾನ್ ಚೇತನರು.

*ಶಾಸ್ತ್ರೀಜಿಯವರು
ಕಷ್ಟಪಟ್ಟು ಮೇಲೆ ಬಂದವರು,
ಗಾಂಧೀಜಿಯವರು
ಮೇಲೆ ಬಂದು ಕಷ್ಟಪಟ್ಟವರು.!!

*ಇವರಿಬ್ಬರದೂ ಸಹಜ
(ಸ್ವಾಭಾವಿಕ) ಸಾವಲ್ಲ.!!

ಓ.ಎಂ.ಆರ್. ಶೀಟ್ ( OMR sheet ) ಹೇಗೆ ತುಂಬಬೇಕು?

    ಇದು ಸ್ಪರ್ಧಾತ್ಮಕ ಯುಗ. ಇಂದು ಬಹುತೇಕ
ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ
ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವೇ ಸಾವಿರ
ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಪೈಪೋಟಿ
ಒಡ್ಡಿರುತ್ತಾರೆ. ಶ್ರಮದಿಂದ ಓದಿ ಪರೀಕ್ಷೆಗೆ ತಯಾರಾಗಿ
ಲವಲವಿಕೆಯಿಂದ ಪರೀಕ್ಷೆಗೇನೋ ಹೋಗಿರುತ್ತಾರೆ.
ಆದರೆ ಅವರಲ್ಲಿ ಕೆಲವು ಅಭ್ಯರ್ಥಿಗಳು ಪರೀಕ್ಷಾ ವೇಳೆ
ಓ.ಎಂ.ಆರ್. ಶೀಟ್ನ ಸೂಚನೆಗಳು ಸರಿಯಾಗಿ
ತುಂಬುವಲ್ಲಿ ಎಡವಟ್ಟು ಮಾಡಿಕೊಂಡು ಕೈಕೈ
ಹಿಸುಕಿಕೊಂಡು ಹೊರಬರುತ್ತಾರೆ. ಇದರಿಂದ
ಶ್ರಮದಿಂದ ಓದಿದ ಪ್ರಯತ್ನವೆಲ್ಲ ನಷ್ಟವಾಗಿ
ವ್ಯಾಕುಲರಾಗುತ್ತಾರೆ.
ಹಾಗಾದರೆ, ತಪ್ಪಾಗದಂತೆ ಓ.ಎಂ.ಆರ್.ಶೀಟ್
(O.M.R Sheet ) ತುಂಬುವುದು ಹೇಗೆ ಎಂಬುದರ
ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.
* ಓ.ಎಂ.ಆರ್. ಶೀಟ್ನ್ನು ಬಬಲ್ ಶೀಟ್ ಎಂತಲೂ
ಕರೆಯುತ್ತಾರೆ. ಬಬಲ್ಗಳ ಮೇಲೆ ಗುರುತು ಮಾಡುವಾಗ
ಸಂಬಂಧಪಟ್ಟ ಪರೀಕ್ಷಾ ಮಂಡಳಿಯು ನಿಗದಿಪಡಿಸಿದ
ನಿಯಮಾವಳಿಗಳಿಗೆ ಅನುಗುಣವಾಗಿ ಪೆನ್ ಅಥವಾ ಪೆನ್ಸಿಲ್ನಿಂದ
ಗುರುತು ಮಾಡಬೇಕು. ಆದ್ದರಿಂದ ಭರ್ತಿ ಮಾಡುವದರ
ಮೊದಲು ಶೀಟ್ನಲ್ಲಿರುವ ಸೂಚನೆಗಳನ್ನು
ಎಚ್ಚರಿಕೆಯಿಂದ ಓದಿಕೊಳ್ಳಬೇಕು.

* ನೀಲಿ/ಕಪ್ಪು ಬಣ್ಣದ ಬಾಲ್ಪೆನ್ ತೆಗೆದುಕೊಂಡು
ಹೋಗಿ. ಎಚ್.ಬಿ. ಪೆನ್ಸಿಲ್ ಜೊತೆಗಿರಲಿ. ಯಾವುದೇ
ಕಾರಣಕ್ಕೂ ಇಂಕ್ ಪೆನ್ ಬಳಸಬೇಡಿ.

* ಓ.ಎಂ.ಆರ್. ವೃತ್ತದ ಗೆರೆಯೊಳಗಿರುವ
ಜಾಗದಷ್ಟನ್ನು ಮಾತ್ರ ತುಂಬಿ. ಭಾಗಶಃ ಇಲ್ಲವೇ
ಚೆಲ್ಲಾಪಿಲ್ಲಿಯಾಗುವಂತೆ ತುಂಬಬಾರದು.

* ಮೊದಲಿಗೆ ಓ.ಎಂ.ಆರ್. ಶೀಟ್ನಲ್ಲಿನ ಸರ್ಕಲ್
(ವೃತ್ತ) ಅಥವಾ ಬಾಕ್ಸ್ಗಳನ್ನು ತೆಳುವಾದ ರೀತಿಯಲ್ಲಿ
ತುಂಬಿ ಅನಂತರ ಗಾಢವಾಗಿ ಕಾಣುವಂತೆ ಮಾಡಿ. ಆದರೆ ಓವರ್
ರೈಟ್ ಮಾಡಬೇಡಿ.

* ಓ.ಎಂ.ಆರ್. ಶೀಟ್ನಲ್ಲಿ ಕೆಲವೊಂದು ಭಾಗಗಳಲ್ಲಿ
`ಇಲ್ಲಿ ಏನನ್ನೂ ಬರೆಯಬೇಡಿ' ಎಂದು
ಸೂಚಿಸಲಾಗಿರುತ್ತದೆ. ಅಂತಹ ಜಾಗಗಳಲ್ಲಿ
ಬರೆಯುವುದಾಗಲೀ, ಗೀಚುವುದಾಗಲೀ ಸಲ್ಲದು.

* ಓ.ಎಂ.ಆರ್. ಬಾರ್ ಕೋಡ್ ಮೇಲೆ ಏನನ್ನೂ
ಮೂಡಿಸಬೇಡಿ.

* ಓ.ಎಂ.ಆರ್. ಇಂಡೆಕ್ಸ್ ಪಾಯಿಂಟ್ ಮೇಲೆ ಏನನ್ನೂ
ಗುರುತು ಹಾಕಬೇಡಿ. ಇವುಗಳು ಕಾರ್ಯನಿರ್ವಹಣೆಗೆ
ಅಗತ್ಯವಾಗಿರುತ್ತವೆ. ಓ.ಎಂ.ಆರ್. ಶೀಟ್
ಐಡೆಂಟಿಫಿಕೇಷನ್ ಬ್ಲಾಕ್ನಲ್ಲಿ ಏನಾದರೂ ಬದಲಾವಣೆಯಾದರೆ
ಆ ಶೀಟ್ನ್ನು ತಿರಸ್ಕರಿಸಲಾಗುತ್ತದೆ.

* ಓ.ಎಂ.ಆರ್. ಶೀಟ್ನ್ನು ಮಡಚಬೇಡಿ. ಪಿನ್ ಅಥವಾ
ಸ್ಟ್ಯಾಪಲ್ ಹಾಕುವುದನ್ನು ಮಾಡಬೇಡಿ.

* ಪರೀಕ್ಷಾ ಅವಧಿ ಮುಗಿಯಲು ಇನ್ನೇನು ೫ ನಿಮಿಷ
ಇದೆ ಎನ್ನುವಾಗಲೇ ಓ.ಎಂ.ಆರ್. ಮೂಲ
ಪ್ರತಿಯೊಂದಿಗಿರುವ ನಕಲು ಪ್ರತಿಯನ್ನು ತುಂಬ
ಎಚ್ಚರಿಕೆಯಿಂದ ಬೇರ್ಪಡಿಸಿ. ಅದಕ್ಕಾಗಿ ಗೆರೆ ಎಳೆದು
`ಕತ್ತರಿ' ಮಾರ್ಕ್ ಕೊಟ್ಟಿರುತ್ತಾರೆ. ಆ ಗೆರೆ ಭಾಗವಷ್ಟೆ
ಮಡಚಿ ನಂತರ ಬೇರ್ಪಡಿಸಿ ಮೂಲಪ್ರತಿಯನ್ನು
ಪರೀಕ್ಷಾ ವೀಕ್ಷಕರಿಗೆ ನೀಡಿ ನಕಲು ಪ್ರತಿಯನ್ನು
ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೆನಪಿರಲಿ,
ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ನಕಲು
ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

* ಓ.ಎಂ.ಆರ್ನಲ್ಲಿ ಗುರುತು ಮಾಡುವುದಕ್ಕಿಂತ
ಮೊದಲು ಮುಖಪುಟದಲ್ಲಿರುವ ಸೂಚನೆಗಳನ್ನು
ಗಮನವಿಟ್ಟು ಓದಿಕೊಳ್ಳಿ.

* ಕೊನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ನಿಮ್ಮ
ಪರೀಕ್ಷೆಯ ನೋಂದಣಿ ಸಂಖ್ಯೆ (ರೆಜಿಸ್ಟ್ರೇಶನ್
ನಂಬರ್)ಯನ್ನು ತುಂಬ ಎಚ್ಚರದಿಂದ ತುಂಬಿ. ಅತ್ತ
ಇತ್ತ ನೋಡುತ್ತ ತುಂಬುವುದು ಮಾಡಬಾರದು.