ಪುಟಗಳು

Sunday, June 19, 2016

Constitution

ಸಂವಿಧಾನದ ಭಾಗಗಳು ಮತ್ತು ಅನುಚ್ಚೇಧಗಳು

ಸಂವಿಧಾನದ ಭಾಗಗಳು

(Constitution's Parts)

ಕ್ರ.ಸಂ -ಭಾಗಗಳು - ಭಾಗಗಳ ವಿವರಣೆ :

01. ಭಾಗ-1 ಒಕ್ಕೂಟ(ಸಂಘ) ಮತ್ತು ಅದರ ಭೂ ಪ್ರದೇಶ (ರಾಜ್ಯಕ್ಷೇತ್ರ) 
02. ಭಾಗ-2 ಪೌರತ್ವ
03. ಭಾಗ-3 ಮೂಲಭೂತ ಹಕ್ಕುಗಳು
04 . ಭಾಗ-4 ರಾಜ್ಯನೀತಿಯ ನಿರ್ದೇಶಕ ತತ್ವಗಳು
05 . ಭಾಗ-4A ಮೂಲಭೂತ ಕರ್ತವ್ಯಗಳು
06 . ಭಾಗ-5 ಕೇಂದ್ರ ಸರ್ಕಾರ
07 . ಭಾಗ-6 ರಾಜ್ಯಗಳ ಸರ್ಕಾರ
08 . ಭಾಗ-7 1956ರಲ್ಲಿ ರದ್ದುಗೊಳಿಸಲಾಗಿದೆ.
09 . ಭಾಗ-8 ಕೇಂದ್ರಾಡಳಿತ ಪ್ರದೇಶಗಳು
10 . ಭಾಗ-9 ಪಂಚಾಯತ್ ರಾಜ್ ಸಂಸ್ಥೆಗಳು
11 . ಭಾಗ-9A ಪೌರಸಭೆಗಳು (ಮುನಿಸಿಪಾಲಿಟಿಗಳು)
12 . ಭಾಗ-9B ಸಹಕಾರಿ ಸೊಸೈಟಿಗಳು
13 . ಭಾಗ-10 ಬುಡಕಟ್ಟು ಮತ್ತು ಅನುಸೂಚಿತ ಪ್ರದೇಶಗಳು
14 . ಭಾಗ-11 ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು
15.  ಭಾಗ-12 ಹಣಕಾಸು ಸ್ವತ್ತು, ದಾವೆಗಳು ಮತ್ತು ಕರಾರುಗಳು
16 . ಭಾಗ-13 ಭಾರತ ದೇಶದೊಳಗೆ ವಾಣಿಜ್ಯ, ವ್ಯಾಪಾರ ಮತ್ತು ಸಂಪರ್ಕ
17 . ಭಾಗ-14 ಕೇಂದ್ರ ಮತ್ತು ರಾಜ್ಯಗಳ ಆಡಳಿತ ಸೇವೆಗಳು 
18 . ಭಾಗ-14A ನ್ಯಾಯಮಂಡಳಿಗಳು (ಟ್ರಿಬ್ಯುನಲ್ಗಳು)
19 . ಭಾಗ-15 ಚುನಾವಣೆಗಳು
20 . ಭಾಗ-16 ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು
21.  ಭಾಗ-17 ಅಧಿಕೃತ ಭಾಷೆ
22 . ಭಾಗ-18 ತುರ್ತು ಪರಿಸ್ಥಿತಿಯ ನಿಯಮಗಳು
23.  ಭಾಗ-19 ಮಿಸಲೇನಿಯಸ್ (ಸಂಕೀರ್ಣ) 
24 . ಭಾಗ-20 ಸಂವಿಧಾನಕ್ಕೆ ತಿದ್ದುಪಡಿ
25 . ಭಾಗ-21 ತಾತ್ಕಾಲಿಕ, ಮಧ್ಯಕಾಲೀನ ಮತ್ತು ವಿಶೇಷ ನಿಯಮಗಳು
26 . ಭಾಗ-22 ಸಂಕ್ಷಿಪ್ತ ಶೀರ್ಷಿಕೆ, ಕಮೆನ್ಸ್ಮೆಂಟ್ ಮತ್ತು ಹಿಂದಿಯಲ್ಲಿ ಸಂವಿಧಾನದ ಪ್ರಕಟಣೆ ಮತ್ತು ರದ್ದುಪಡಿಸುವಿಕೆ.
Gk4kpsc

ಭಾರತದ ಸಂವಿಧಾನದಲ್ಲಿರುವ ವಿಧಿಗಳು (Articles)

ಅನುಚ್ಛೇದಗಳು- ವಿವರಣೆ :

💐 ಭಾಗ-1 ಒಕ್ಕೂಟ (ಸಂಘ) ಮತ್ತು ಸಂಘ ಕ್ಷೇತ್ರ 💐

ಅನುಚ್ಛೇದ 1 ~ ಒಕ್ಕೂಟ (ರಾಜ್ಯದ) ಹೆಸರು ಮತ್ತು ರಾಜ್ಯಕ್ಷೇತ್ರ

ಅನುಚ್ಛೇದ 2~  ಹೊಸ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

ಅನುಚ್ಛೇದ 2A ನಿರಸಗೊಳಿಸಲಾಗಿದೆ

ಅನುಚ್ಛೇದ 3 ~ ನೂತನ ರಾಜ್ಯಗಳ ರಚನೆ ಹಾಗೂ ಈಗಿರುವ ರಾಜ್ಯಗಳ ಪ್ರದೇಶಗಳ ,ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ

ಅನುಚ್ಛೇದ 4 ~ 2ನೇ ಮತ್ತು 3ನೇ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು 1ನೇ ಮತ್ತು 4ನೇ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಹಾಗೂ ಪ್ರಾಸಂಗಿಕ, ಪೂರಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧಗಳನ್ನು ಕಲ್ಪಿಸುವುದು.

💐 ಭಾಗ-2 ನಾಗರೀಕತ್ವ (ಪೌರತ್ವ) 💐

ಅನುಚ್ಚೇದ 5 ~ಸಂವಿಧಾನದ ಪ್ರಾರಂಭದಲ್ಲಿ ನಾಗರೀಕತ್ವ

ಅನುಚ್ಛೇದ 6 ~ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರೀಕತ್ವದ ಹಕ್ಕುಗಳು

ಅನುಚ್ಛೇದ 7~ ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರೀಕತ್ವದ ಹಕ್ಕುಗಳು

ಅನುಚ್ಛೇದ 8 ~ಭಾರತದ ಹೊರಗೆ ವಾಸಿಸುತ್ತಿರುವ, ಭಾರತೀಯ ಮೂಲದ ಕೆಲವು ವ್ಯಕ್ತಿಗಳಿಗೆ ನಾಗರೀಕತ್ವದ ಹಕ್ಕುಗಳು.

ಅನುಚ್ಛೇದ 9 ~ಸ್ವಇಚ್ಛೆಯಿಂದ ವಿದೇಶಿ ರಾಜ್ಯದ ನಾಗರೀಕತ್ವವನ್ನು ಪಡೆದವರು ಭಾರತದ ನಾಗರೀಕರಲ್ಲ

ಅನುಚ್ಛೇದ 10 ~ನಾಗರೀಕತ್ವದ ಹಕ್ಕುಗಳ ಮುಂದುವರೆಯುವಿಕೆ

ಅನುಚ್ಛೇದ 11 ~ಸಂಸತ್ತು ನಾಗರೀಕತ್ವದ ಹಕ್ಕನ್ನು ಕಾನೂನಿನ ಮೂಲಕ ವಿನಿಯಮಿಸುವುದು.

💐 ಭಾಗ-3 ಮೂಲಭೂತ ಹಕ್ಕುಗಳು 💐

ಅನುಚ್ಛೇದ 12~ ಪರಿಭಾಷೆ

ಅನುಚ್ಛೇದ 13 ~ಮೂಲಭೂತ ಹಕ್ಕುಗಳಿಗೆ ಅಸಂಗತವಾದ ಅಥವಾ ಅವುಗಳನ್ನು ಅಲ್ಪೀಕರಿಸುವಂಥ ಕಾನೂನುಗಳು

ಅನುಚ್ಛೇದ 14~ ಕಾನೂನಿನ ಮುಂದೆ ಸರ್ವರಿಗೂ ಸಮಾನರು

ಅನುಚ್ಛೇದ 15~ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ.

ಅನುಚ್ಛೇದ 16~ ಸಾರ್ವಜನಿಕ ವಿಚಾರಗಳಲ್ಲಿ ಸಮಾನಾವಕಾಶ

ಅನುಚ್ಛೇದ 16(1) ~ಉದ್ಯೋಗ ವಿಷಯದಲ್ಲಿ ಸಮಾನತೆ

ಅನುಚ್ಛೇದ 17~ ಅಸ್ಪೃಶ್ಯತಾ ನಿರ್ಮೂಲನೆ

ಅನುಚ್ಛೇದ 18 ~ಬಿರುದುಗಳ ರದ್ದತಿ

ಅನುಚ್ಛೇದ 19 ~ವಾಕ್ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ

19(1)(A) ~ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

19(1)(B)~ ಸಭೆ ಸೇರುವ ಸ್ವಾತಂತ್ರ್ಯ

19(1)(D) ~ಸಂಚಾರ ಸ್ವಾತಂತ್ರ್ಯ

19(1)(E) ~ವಾಸ ಮಾಡುವ ನೆಲೆಸುವ ಸ್ವಾತಂತ್ರ್ಯ

ಅನುಚ್ಛೇದ 20 ~ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ

20(2) ಇಮ್ಮಡಿ ವಿಪತ್ತು

20(3) ಸ್ವಯಂ ಅಪರಾಧನೆಯ ವಿರುದ್ಧ ನಿಷೇಧ

ಅನುಚ್ಛೇದ 21 ~ಜೀವ ಸಂರಕ್ಷಣೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ

21(A) ~ವಿದ್ಯಾಭ್ಯಾಸದ ಹಕ್ಕು

ಅನುಚ್ಛೇದ 22~ ಕೆಲವು ಸಂದರ್ಭಗಳಲ್ಲಿ ದಸ್ತಗಿರಿಯಿಂದ ಮತ್ತು ಸ್ಥಾನಬದ್ಧತೆಯಿಂದ ಸಂರಕ್ಷಣೆ ...