ಪುಟಗಳು

Tuesday, June 14, 2016

ನಮ್ಮನೆಲ್ಲ ಬೆಸೆಯುವ ರಕ್ತ
ರಕ್ತದ ಗುಂಪು ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ, ಕಾರ್ಲ್ ಲ್ಯಾಂಡ್ಸ್ಟೀನರ್ ಜನ್ಮದಿನ ಇಂದು. ಅವರ ಸಾಧನೆಯ ಗೌರವಾರ್ಥವಾಗಿ ‘ವಿಶ್ವ ರಕ್ತದಾನ ದಿನ’ ಆಚರಿಸಲಾಗುತ್ತದೆ. ಪ್ರತಿವರ್ಷ ಜೂನ್ 14ರಂದು ನಡೆಯುವ ಈ ಆಚರಣೆಯಲ್ಲಿ ರಕ್ತದಾನದ ಮಹತ್ವ ತಿಳಿಸಿ, ಅದು ಜೀವ ಉಳಿಸುವ ಮಹಾದಾನ ಎಂಬ ಅರಿವನ್ನು ಜನರಲ್ಲಿ ಮೂಡಿಸಲಾಗುತ್ತದೆ.