ಪುಟಗಳು

Sunday, July 10, 2016

ಪಿಡಿಒ ನೇಮಕಾತಿ ಅಧಿಸೂಚನೆ ನಾಳೆ ಪ್ರಕಟ:~

ಕೆಇಎಗೆ ಪರೀಕ್ಷೆ ಜವಾಬ್ದಾರಿ.!!

ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದದ ಒಟ್ಟು 1624 ಹುದ್ದೆಗಳ ನೇಮಕಾತಿಗೆ ಸೋಮವಾರ ಅಧಿಸೂಚನೆ ಹೊರಬೀಳಲಿದೆ.!!!

ಪರೀಕ್ಷಾ ವೇಳಾಪಟ್ಟಿ ಮತ್ತು ಅರ್ಜಿ ಸಲ್ಲಿಕೆ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗುವುದು.

ರಾಜ್ಯದ 24 ಜಿಲ್ಲೆಗಳಲ್ಲಿ 638 ಪಿಡಿಒ ಹಾಗೂ 638 ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಹುದ್ದೆ ಸೇರಿ 1276 ಹುದ್ದೆಗಳಿವೆ.

ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ 177 ಪಿಡಿಒ ,
171  ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಸೇರಿ ಒಟ್ಟು 348 ಹುದ್ದೆ ಭರ್ತಿ ಮಾಡುವುದಾಗಿ ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಅಕ್ಟೋಬರ್ ಎರಡನೇ ವಾರದೊಳಗೆ ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.

ಈ ಬಾರಿ ನೇಮಕಾತಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೆಪಿಎಸ್‌ಸಿ ಬದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ  ವಹಿಸಲಾಗಿದೆ.                                  (ಕೃಪೆ:ವಿಜಯವಾಣಿ ಪುಟ 6)

ಸ್ನೇಹಿತರೆ,
ನಿಮ್ಮ ತಯಾರಿಯ ವೇಗ ಇನ್ನಷ್ಟು ಹೆಚ್ಚಾಗಬೇಕಲ್ಲವೇ?
ಹಾಗಾದರೆ ಇನ್ನೇಕೆ ತಡ?
ಈ ಕ್ಷಣದಿಂದಲೇ ಪ್ರಾರಂಭಿಸಿ.
ಸಮಯ ಅಮೂಲ್ಯವಾಗಿದೆ.
ಅದನ್ನು ಹಾಳುಮಾಡಬೇಡಿ.
ನೀವು ಸಮಯವನ್ನು ಹಾಳು ಮಾಡಿದರೆ
ಅದು ನಿಮ್ಮನ್ನು ಹಾಳು ಮಾಡೀತು ಎಚ್ಚರ!!!!!!!!!