ಪುಟಗಳು

Sunday, September 04, 2016

ವಾಟ್ಸಾಪ್ ಗ್ರೂಪ್ Invite Link ಮಾಡುವುದು ಹೇಗೆ ಗೋತ್ತಾ...?

ನೀವು ವಾಟ್ಸಾಪ್ ನಲ್ಲಿ ಅನೇಕ ಗ್ರೂಪ್'ಗಳನ್ನು ಸದಸ್ಯರಾಗಿರಬಹುದು. ಹಾಗೆಯೇ ವಿವಿಧ ಗ್ರೂಪ್'ಗಳನ್ನು ಮಾಡಿ ವಿಷಯ ವಿನಿಮಯ ಮಾಡಿಕೊಳ್ಳುತ್ತಿರಬಹುದು. ಗ್ರೂಪ್'ಗಳಿಗೆ ಮತ್ತಷ್ಟು ಜನರನ್ನು ಸೇರಿಸಬೇಕು ಎಂದು ನಿಮ್ಮ ಇಚ್ಚೆಯಾಗಿರುತ್ತದೆ. ಆದರೆ ಅದು ಕಷ್ಟದ ಕೆಲಸ. ಯಾಕೆಂದರೆ ಪ್ರತಿಯೊಬ್ಬರ ನಂಬರನ್ನು ಮೊದಲು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರವಷ್ಟೇ Add ಮಾಡಲು ಸಾಧ್ಯ. ಇನ್ನೂ ಕೆಲವರ ನಂಬರ್ ನಿಮ್ಮ ಬಳಿಯಿರುವುದಿಲ್ಲ. ಹಾಗಾಗಿ ಅವರಿಂದ ನಿಮಗೆ ಎಷ್ಟೋ ಮಾಹಿತಿಗಳು ಸಿಗುತ್ತಿಲ್ಲ ಎಂಬ ಕೊರಗು ನಿಮಗಿದ್ದರೆ ಇಲ್ಲಿದೆ ಪರಿಹಾರ.

ನಾವು ಹೇಳಿದಂತೆ ಮಾಡಿದರೆ ನಿಮ್ಮ ವಾಟ್ಸಾಪ್ ಗ್ರೂಪಿಗೆ ನಿಮ್ಮ ಮೊಬೈಲ್'ನಲ್ಲಿ ಯಾವುದೇ ನಂಬರ್ ಸೇವ್ ಮಾಡದೇ, ನೀವು ಯಾವುದೇ ನಂಬರ್ ಗ್ರೂಪಿಗೆ Add ಮಾಡದೇ ನಿಮ್ಮ ಸ್ನೇಹಿತರೇ ಗ್ರೂಪಿಗೆ Join ಆಗಬಹುದು. ಅದು "Group Invite Link" ಮೂಲಕ...! ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

ಮೊದಲಿಗೆ "GB WhatsApp APK" ಯನ್ನು ಡೌನ್ಲೋಡ್ ಮಾಡಿ ಇನ್ಸ್ಟಲ್ ಮಾಡಿ.
'GB WhatsApp APK ಗಾಗಿ ಇಲ್ಲಿ ಕ್ಕಿಕ್ ಮಾಡಿ'

ಈಗ GB WhatsApp  ಒಪನ್ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. ನಂತರ ಆಟೋ ವೇರಿಪೈ ಆಗುವರೆಗೂ ಕಾಯಿರಿ.

ನಂತರ ನಿಮ್ಮ ಡಾಟಾ ಬ್ಯಾಕ್ ಅಪ್ ಮಾಡಿ. ಬೇಡವೆಂದರೆ Exit ಆಗಿ.

ನೀವು ಯಾವ ಗ್ರೂಪಿನ invite Link ಮಾಡಬೇಕೋ ಅದನ್ನು ಒಪನ್ ಮಾಡಿ.

ಗ್ರೂಪಿನ ಮೆನು ಐಕಾನ್ ಕ್ಲಿಕ್ ಮಾಡಿ Group Info ಅನ್ನು ಪ್ರೆಸ್ ಮಾಡಿ.

+ ಪ್ಲಸ್ ಚಿನ್ಹೆಯ ಮೇಲೆ ಕ್ಲಿಕ್ ಮಾಡಿ.

Invite group via link ಅಪ್ಸನ್ ಆಯ್ಕೆ ಮಾಡಿ.

ಈಗ ನೀವು ಆ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ, ಸಹಪಾಠಿಗಳಿಗೆ ಶೇರ್ ಮಾಡಿ.
ಸೂಚನೆ: ನೀವು ಗ್ರೂಪ್ invite link ಮಾಡಬಯಸುವ ಗ್ರೂಪಿಗೆ ಆಡ್ಮಿನ್ ಆಗಿರಬೇಕು.