ಪಿಡಿಒ ನೇಮಕಾತಿ ಅಧಿಸೂಚನೆ ನಾಳೆ ಪ್ರಕಟ:~
ಕೆಇಎಗೆ ಪರೀಕ್ಷೆ ಜವಾಬ್ದಾರಿ.!!
ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದದ ಒಟ್ಟು 1624 ಹುದ್ದೆಗಳ ನೇಮಕಾತಿಗೆ ಸೋಮವಾರ ಅಧಿಸೂಚನೆ ಹೊರಬೀಳಲಿದೆ.!!!
ಪರೀಕ್ಷಾ ವೇಳಾಪಟ್ಟಿ ಮತ್ತು ಅರ್ಜಿ ಸಲ್ಲಿಕೆ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗುವುದು.
ರಾಜ್ಯದ 24 ಜಿಲ್ಲೆಗಳಲ್ಲಿ 638 ಪಿಡಿಒ ಹಾಗೂ 638 ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಹುದ್ದೆ ಸೇರಿ 1276 ಹುದ್ದೆಗಳಿವೆ.
ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ 177 ಪಿಡಿಒ ,
171 ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಸೇರಿ ಒಟ್ಟು 348 ಹುದ್ದೆ ಭರ್ತಿ ಮಾಡುವುದಾಗಿ ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಅಕ್ಟೋಬರ್ ಎರಡನೇ ವಾರದೊಳಗೆ ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.
ಈ ಬಾರಿ ನೇಮಕಾತಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೆಪಿಎಸ್ಸಿ ಬದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ವಹಿಸಲಾಗಿದೆ. (ಕೃಪೆ:ವಿಜಯವಾಣಿ ಪುಟ 6)
ಸ್ನೇಹಿತರೆ,
ನಿಮ್ಮ ತಯಾರಿಯ ವೇಗ ಇನ್ನಷ್ಟು ಹೆಚ್ಚಾಗಬೇಕಲ್ಲವೇ?
ಹಾಗಾದರೆ ಇನ್ನೇಕೆ ತಡ?
ಈ ಕ್ಷಣದಿಂದಲೇ ಪ್ರಾರಂಭಿಸಿ.
ಸಮಯ ಅಮೂಲ್ಯವಾಗಿದೆ.
ಅದನ್ನು ಹಾಳುಮಾಡಬೇಡಿ.
ನೀವು ಸಮಯವನ್ನು ಹಾಳು ಮಾಡಿದರೆ
ಅದು ನಿಮ್ಮನ್ನು ಹಾಳು ಮಾಡೀತು ಎಚ್ಚರ!!!!!!!!!