ಬೆಂಗಳೂರು: ರಾಜ್ಯಾದ್ಯಂತ 8,000 ಸರಕಾರಿ ಪ್ರಾಥಮಿಕ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಆಗಲಿವೆ. ವಿದ್ಯಾರ್ಥಿಗಳ ಹಾಜರಾತಿಗೆ ಆನ್ಲೈನ್ ಸ್ಪರ್ಶ ಸಿಗಲಿದೆ. ಹಾಗೆೆಯೇ, ಶಿಕ್ಷಕರೂ ಬಯೋಮೆಟ್ರಿಕ್ ಹಾಜರಾತಿಗೆ ಒಳಪಡುತ್ತಾರೆ. ಶಿಕ್ಷಕರ ಬಯೋಮೆಟ್ರಿಕ್ ಮತ್ತು ವಿದ್ಯಾರ್ಥಿಗಳ ಆನ್ಲೈನ್ ಹಾಜರಾತಿಗೆ ಸರ್ವಶಿಕ್ಷಾ ಅಭಿಯಾನ ದಿಂದ "ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್' ಅಭಿವೃದ್ಧಿ ಪಡಿಸಲಾಗಿದೆ. ಈ ಯೋಜನೆಯಡಿ ಶಿಕ್ಷಕರಿಗೆ ಬಹೂಪಯೋಗಿ ಟ್ಯಾಬ್ ನೀಡಲಾಗುತ್ತದೆ. ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಸರಕಾರದಿಂದ ತಾತ್ವಿಕ ಅನುಮೋದನೆ ದೊರೆತಿದೆ.
2017-18ನೇ ಸಾಲಿನಲ್ಲಿ 170ಕ್ಕಿಂತ ಅಧಿಕ ಮಕ್ಕಳಿರುವ ಸರಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.