ಪುಟಗಳು

Wednesday, September 07, 2016

ಸುದ್ದಿಯಲ್ಲಿರುವ ವ್ಯಕ್ತಿಗಳು

ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್
ಆಗಿ ಉರ್ಜಿತ್ ಪಟೇಲ್ ನೇಮಕ

ಸುದ್ದಿಯಲ್ಲಿರುವ ವ್ಯಕ್ತಿಗಳು

ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗರ್ವನರ್
ಆಗಿ ಉರ್ಜಿತ್ ಪಟೇಲ್ ಅವರನ್ನು ಕೇಂದ್ರ ಸರ್ಕಾರ ನೇಮಕ
ಮಾಡಿದೆ. ಪಟೇಲ್ ಭಾರತೀಯ ರಿಸರ್ವ್ ಬ್ಯಾಂಕ್ ನ
24ನೇ ಗವರ್ನರ್. ರಘುರಾಮ್ ರಾಜನ್ ಅವರ
ಉತ್ತರಾಧಿಕಾರಿಯಾಗಿರುವ ಪಟೇಲ್ ಮೂರು ವರ್ಷಗಳ ಕಾಲ ಗವರ್ನರ್
ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪಟೇಲ್ ಪ್ರಸ್ತುತ
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಡೆಪ್ಯೂಟಿ
ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ
ನೇಮಕಗೊಂಡ 8ನೇ ಡೆಪ್ಯೂಟಿ ಗವರ್ನರ್.
ಹಿನ್ನಲೆ :
ಸಂಸದೀಯ ಕಾರ್ಯದರ್ಶಿಯ ನೇತೃತ್ವದ ಎಫ್​ಎಸ್​
ಆರ್​ಎಎಸ್​ಸಿ (Sector Regulatory Appointments
Search Committee)ಸಮಿತಿಯ ಶಿಫಾರಸ್ಸಿನ ಮೇರೆಗೆ
ಸಂಪುಟ ನೇಮಕಾರಿ ಸಮಿತಿ ಉರ್ಜಿತ್ ಪಟೇಲ್ ಅವರ
ಹೆಸರನ್ನು ಅಂತಿಮಗೊಳಿಸಿದೆ.
ಉರ್ಜಿತ್ ಪಟೇಲ್ ಬಗ್ಗೆ :
ಅಕ್ಟೋಬರ್ 28, 2963 ರಲ್ಲಿ ಜನನ. ಲಂಡನ್ ಸ್ಕೂಲ್ ಆಫ್
ಇಕಾನಮಿಕ್ಸ್ ನಲ್ಲಿ ನಂತರ ಆಕ್ಸ್’ಫರ್ಡ್ ವಿವಿಯಲ್ಲಿ
1986 ರಲ್ಲಿ ಎಂ.ಫಿಲ್ ಪದವಿ.
1990 ರಲ್ಲಿ ಯಾಲೆ ವಿಶ್ವವಿದ್ಯಾಲಯದಲ್ಲಿ
ಅರ್ಥಶಾಸ್ತ್ರದಲ್ಲಿ ಪಿ.ಎಚ್’ಡಿ.
1990-1995 ಅವಧಿಯಲ್ಲಿ ಇಂಟರ್’ನೇಶನಲ್ ಮಾನಿಟರಿ
ಫಂಡ್’ನಲ್ಲಿ ಸೇವೆ. 1998-2001 ಹಣಕಾಸು
ಸಚಿವಾಲಯದಲ್ಲಿ ಸಲಹೆಗಾರರಾಗಿ ಸೇವೆ.
ಮೊದಲ ಬಾರಿಗೆ 2013ರಲ್ಲಿ ರಿಸರ್ವ್ ಬ್ಯಾಂಕ್
ಡೆಪ್ಯೂಟಿ ಗವರ್ನರ್ ಆಗಿ ನೇಮಕ. 2016ರಲ್ಲಿ ರಿಸರ್ವ್
ಬ್ಯಾಂಕ್ ಡೆಪ್ಯೂಟಿ ಗವರ್ನರ್ ಆಗಿ ಪುನರ್’ನೇಮಕ.
ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ್ದ ಹಣಕಾಸು
ಪರಾಮರ್ಶೆ ನೀತಿ ಸಮಿತಿಗೆ ಉರ್ಜಿತ್ ಪಟೇಲ್
ನೇತೃತ್ವವಹಿಸಿದ್ದರು. ಬಡ್ಡಿದರ ನಿಗದಿ ಪಡಿಸಲು ಹಣಕಾಸು
ಪರಾಮರ್ಶೆ ಸಮಿತಿಯನ್ನು ರಚಿಸುವಂತೆ ಈ ಸಮಿತಿ
ಶಿಫಾರಸ್ಸು ಮಾಡಿತ್ತು. ಇದಲ್ಲದೇ ರಾಜ್ಯ ಹಾಗೂ ಕೇಂದ್ರ
ಸರ್ಕಾರಗಳ ವಿವಿಧ ಉನ್ನತ ಮಟ್ಟದ ಸಮಿತಿಗಳ
ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.