ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್ಎಲ್ ಬೈರಪ್ಪ (94) ನವರು ಇಂದು ವಿಧಿವಶರಾಗಿದ್ದಾರೆಂದು ತಿಳಿಸಲು ಅತ್ಯಂತ ವಿಷಾಧವೆನಿಸುತ್ತಿದೆ..!
ಸಾಹಿತ್ಯ ಜಗತ್ತಿನ ಸೂಪರ್ ಸ್ಟಾರ್, ಕರುನಾಡಿನ ಅಕ್ಷರ ಮಾಂತ್ರಿಕ, ಸಾರಸ್ವತ ಲೋಕದ ಸರದಾರ, ಸರಸ್ವತಿ ಮಾತೆಯ ಸುಪುತ್ರ, ಮರಳಿ ಬಾರದೂರಿಗೆ ಸರಿದ (SL) ಭೈರಪ್ಪ.!
ಅತ್ಯಂತ ಹಿರಿಯ ಸಾಹಿತಿಯನ್ನು ಕಳೆದುಕೊಂಡು ನಮ್ಮ ನಾಡು (ಸಾರಸ್ವತ ಲೋಕ) ಅನಾಥವಾಗಿದೆ, ಅವರ ಸಾಹಿತ್ಯದ ಕೊಡುಗೆ ಸಾರಸ್ವತ ಲೋಕಕ್ಕೆ ಎಂದೆಂದೂ ಮರೆಯಲಾಗದ್ದು, ಅನನ್ಯವಾಗಿದೆ......!
ಪರ್ವ, ಉತ್ತರಕಾಂಡ, ವಂಶವೃಕ್ಷ, ಆವರಣ ಸೇರಿ ಹಲವು ಕೃತಿಗಳನ್ನು SL ಬೈರಪ್ಪ ನವರು ರಚಿಸಿದ್ದರು. ಗೃಹ ಭಂಗ ಕಾದಂಬರಿ ಧಾರಾವಾಹಿಯಾಗಿದ್ದರೆ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಸಿನಿಮಾಗಳಾಗಿವೆ. ಅವರ ಕೃತಿಗಳು ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.!
ಅಗಲಿದ ಅದಮ್ಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆ ದುಃಖವನ್ನು ಸೈರಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಾದಿಯಾಗಿ ಇಡೀ ಸಾರಸ್ವತ ಲೋಕಕ್ಕೆ ನೀಡಲಿ.! ಅಗಲಿದ ಆ ಮಹಾ ಸಾಹಿತಿಗೆ ನಮ್ಮಿಂದ ಭಾವಪೂರ್ಣ ಶ್ರದ್ಧಾಂಜಲಿ.!!
