Wikipedia

Search results

Friday, June 10, 2016

ಗಣತಂತ್ರ ದಿವಸ(26/1/1950)

ಗಣತಂತ್ರ ದಿವಸವೇಕೆ ನಮಗೆ ಇಷ್ಟು ಮಹತ್ವದ್ದಾಗಿದೆ ಎಂಬ ಪ್ರಶ್ನೆ ಕೇಳಿದರೆ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆಗಾಗಿ ಬಾಯಿಪಾಠ ಮಾಡಿದ್ದ ಆ ವಾಕ್ಯಗಳೆಲ್ಲಾ ಮರೆತು ಹೋಗಿರುತ್ತವೆ. ಕೆಲವರಿಗೆ ಮಾತ್ರ ಈ ದಿನವೇ ನಮ್ಮ ರಾಜ್ಯಾಂಗ ವ್ಯವಸ್ಥೆ ಜಾರಿಗೆ ಬಂದ ದಿನ ಎಂದು ನೆನಪಿರಬಹುದು. ಈ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಭಾರತಕ್ಕೆ ಸ್ವಾತಂತ್ಯ ಲಭಿಸಿದ ಬಳಿಕ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಜಾರಿಗೆ ಬಂದ ಬಳಿಕವೂ ಭಾರತದ ಆಡಳಿತ ವ್ಯವಸ್ಥೆ ಒಂದು ನೀತಿಗೆ ಒಳಪಟ್ಟಿರಲಿಲ್ಲ. ಅಂದಿನ ಅತಿದೊಡ್ಡ ರಾಜಕೀಯ ಶಕ್ತಿಯಾಗಿದ್ದ ಕಾಂಗ್ರೆಸ್ ಮತ್ತು ನಾಯಕರಾದ ಮಹಾತ್ಮಾ ಗಾಂಧಿ, ನೆಹರೂ, ಸುಭಾಶ್ ಚಂದ್ರ ಬೋಸ್, ರಾಜಾಜಿ, ಪಟೇಲ್ ಮೊದಲಾದವರ ಮುಂದಾಳತ್ವದಲ್ಲಿ ಲಾಹೋರಿನ ರಾವಿ ನದಿಯ ತೀರದಲ್ಲಿ ಜನವರಿ ಇಪ್ಪತ್ತಾರರಂದೇ

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಲಾಗಿತ್ತು. ಆ ದಿನವೇ ಮಹಾತ್ಮಾ ಗಾಂಧೀಜಿಯವರು ತಮ್ಮ ದಂಡಿ ಯಾತ್ರೆಯನ್ನೂ ಆರಂಭಿಸಿದ್ದರು. ಹಾಗಾಗಿ ೧೯೫೦ರ ಜನವರಿ ಇಪ್ಪತ್ತಾರಕ್ಕೂ ಮೊದಲೇ ಸಂವಿಧಾನ ಸಿದ್ಧವಾಗಿದ್ದರೂ ಸುಮಾರು ಎರಡು ತಿಂಗಳ ನಂತರ ಜನವರಿ ಇಪ್ಪತ್ತಾರಂದೇ ಮಂಡಿಸಲಾಯಿತು.

ನಿಜವಾಗಿ ಹೇಳಬೇಕೆಂದರೆ ಭಾರತದ ಮೊದಲ ಸ್ವಾತಂತ್ರ್ಯದ ದಿನ ಜನವರಿ ಇಪ್ಪತ್ತಾರೇ ಆಗಿದೆ. ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.

ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವಾದ ಭಾರತದ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. ೪೪೪ ವಿಧಿಗಳನ್ನು ೨೨ ಭಾಗಗಳಲ್ಲಿಯೂ, ೧೦ (ನಂತರ ೧೨) ಅನುಚ್ಛೇದಗಳನ್ನೂ,, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನದ ಮೂಲ ಪ್ರತಿ 479 ಪುಟಗಳ, ಕೈಬರಹದಲ್ಲಿ ಬರೆದಿರುವ ಬೃಹತ್ ಗ್ರಂಥವಾಗಿದ್ದು ಅಂದಿನ ಎಲ್ಲಾ ನಾಯಕರು ಈ ಸಂವಿಧಾನದ ಬಗ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿ ಹಸ್ತಾಕ್ಷರ ನಮೂದಿಸಿದ್ದರು. ಈ ಗ್ರಂಥವನ್ನು ಇಂದಿಗೂ ಸುಸ್ಥಿತಿಯಲ್ಲಿ ಕಾಪಾಡಲಾಗಿದ್ದು ನಮ್ಮ ಪಾರ್ಲಿಮೆಂಟ್ ಭವನದಲ್ಲಿ ಹೀಲಿಯಂ ಅನಿಲ ತುಂಬಿದ ಗಾಜಿನ ಕವಚವಿರುವ ಸುಭದ್ರ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ.

ವಿಧಾನಪರಿಷತ್ ಫಲಿತಾಂಶ:~

ಜೆಡಿಎಸ್‌ಗೆ ನಷ್ಟ, ಅರಳಿದ ಕಮಲ

June 10 2016, ಬೆಂಗಳೂರು,

ಜೂನ್ 10 : ರಾಜ್ಯದ ವಿಧಾನಪರಿಷತ್ ಗೆ ನಡೆದ ಚುನಾವಣೆ ಫಲಿತಾಂಶ ಫಲಿತಾಂಶ ಪ್ರಕಟವಾಗಿದೆ. ವಿಧಾನಸಭೆಯ ಸದಸ್ಯರು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಬೆಳಗ್ಗೆ ಮತದಾನ ಮಾಡಿದ್ದು ಸಂಜೆಗೆ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ ನ, ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಜಯಗಳಿಸಿದ್ದಾರೆ. ಬಿಜೆಪಿಯ ವಿ.ಸೋಮಣ್ಣ, ಲೆಹರ್ ಸಿಂಗ್ ಅವರಿಗೂ ವಿಜಯಲಕ್ಷ್ಮೀ ಒಲಿದಿದೆ. ಜೆಡಿಎಸ್‌ ನಾರಾಯಣ ಸ್ವಾಮಿ ಗೆಲುವಿನ ನಗೆ ಬೀರಿದ್ದು ಮತ್ತೊಬ್ಬ ಅಭ್ಯರ್ಥಿ ಡಾ.ವೆಂಕಟಪತಿ ಅವರಿಗೆ ಸೋಲಾಗಿದೆ.

ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ
manjupaste.blogspot.com

* ಕೆಪಿಎಸ್ಸಿ ಮೂಲಕ ನೇಮಕ
* ಎರಡು ವರ್ಷದ ಡಿಪ್ಲೊಮಾ ಇನ್ ಫಾರೆಸ್ಟ್ರಿ ಕೋರ್ಸ್.

ಒಟ್ಟು ಹುದ್ದೆ ಗಳ ಸಂಖ್ಯೆ : 25

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 08, 2016.

ಮಾಹಿತಿಗೆ ವೆಬ್ ವಿಳಾಸ: www.kpsc.kar.nic.in

ದೂರವಾಣಿ ಸಂಖ್ಯೆ: 9538791579/7337812816

ಅರಣ್ಯ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡುವ ಸಲುವಾಗಿ 2 ವರ್ಷಗಳ ಡಿಪ್ಲೊಮಾ ಕೋರ್ಸ್ ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅರ್ಜಿ ಆಹ್ವಾನಿಸಿದೆ. ರಾಜ್ಯದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ 'ಎ' ವೃಂದದ ಹುದ್ದೆಗಳ ನೇಮಕಕ್ಕಾಗಿ ಈ ಕೋರ್ಸ್ ನಡೆಸಲಾಗುತ್ತದೆ.

ಶೈಕ್ಷಣಿಕ ಅರ್ಹತೆ :

ಫಾರೆಸ್ಟ್ರಿ ಪದವೀಧರರಿಗಾಗಿ ಮೀಸಲಿಸಿರಿದ ಹುದ್ದೆಗಳಿಗೆ ಫಾರೆಸ್ಟ್ರಿ ವಿಷಯದಲ್ಲಿ ವಿಜ್ಞಾನ ಪದವಿ ಪಡೆದಿರಬೇಕು. ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ ಪದವೀಧರರಿಗೆ ಮೀಸಲಾದ ಹುದ್ದೆಗಳಿಗೆ ಕೃಷಿ/ತೋಟಗಾರಿಕೆ/ ಪಶು ವೈದ್ಯ ವಿಜ್ಞಾನ ಪದವಿ/ ಗಣಿತ ಶಾಸ್ತ್ರ, ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಬಯೋಕೆಮಿಸ್ಟ್ರಿ, ಮೈಕ್ರೊ ಬಯಾಲಜಿ, ಬಯೋಟೆಕ್ನಾಲಜಿ ವಿಷಯಗಳಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ವಿಷಯಗಳೊಡನೆ ವಿಜ್ಞಾನ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.

ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಕೆಪಿಎಸ್ಸಿ ವೆಬ್ನಿಂದ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಅರ್ಜಿ ಭರ್ತಿ ಮಾಡಿದ ನಂತರ ಚಲನ್ ಪ್ರತಿಯ ಪ್ರಿಂಟೌಟ್ ತೆಗೆದುಕೊಂಡು ಹತ್ತಿರದ ಇ-ಪೇಮೆಂಟ್ ಅಂಚೆ ಕಚೇರಿಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕು.

ಪರೀಕ್ಷಾ ಶುಲ್ಕ: 300 ರೂ. ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ಮಾಜಿ ಸೈನಿಕರಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷ. ಎಸ್ಸಿ/ಎಸ್ಟಿಗೆ 35 ವರ್ಷ, ಒಬಿಸಿಗೆ 33 ವರ್ಷ.