Wikipedia

Search results

Monday, August 14, 2017


                                                              Happy Indipence Day

Thursday, August 10, 2017

ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

```ಒಂದು ಬಡ ಕುಟುಂಬವಿತ್ತು.
ಆ ಕುಟುಂಬದಲ್ಲಿ 5 ಜನರಿದ್ದರು. ತಂದೆ ತಾಯಿ ಮತ್ತು
ಮೂವರು ಮಕ್ಕಳು,
ತಂದೆ ಯಾವತ್ತೂ ಅನಾರೋಗ್ಯದಿಂದ ಇರುತ್ತಿದ್ದನು, ಕಡೆಗೆ
ಒಂದು ದಿನ ತಂದೆ ಸಾಯುತ್ತಾನೆ, 3 ದಿನಗಳವರೆಗೆ
ಅಕ್ಕಪಕ್ಕದವರು ಊಟ ಕೊಡುತ್ತಾರೆ.
ನಂತರ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ತಾಯಿಯು
ಕೆಲದಿನಗಳವರೆಗೆ ಹಾಗೋ ಹೀಗೋ ಮಾಡಿ ಮಕ್ಕಳಿಗೆ ಊಟ
ಕೊಡುತ್ತಾಳೆ, ಆದರೆ ಎಲ್ಲಿಯವರೆಗೆ? ಕೊನೆಗೆ
ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ
ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 8
ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ.
ಒಂದು ದಿನ..
5 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ.
"ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ?"
ಆಗ ತಾಯಿ ದುಃಖದಲ್ಲಿ ಕೇಳುತ್ತಾಳೆ ಯಾಕಮ್ಮ ಹಾಗೆ ಕೇಳ್ತಿಯಾ?.
ಆ 5 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿದರೆ
ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತವೆ.
ಆ ಮಗುವಿನ ಉತ್ತರ ಹೀಗಿರುತ್ತದೆ "ಅಮ್ಮಾ. ಅಣ್ಣ
ಸತ್ತರೆ ಊಟ ಅಕ್ಕಪಕ್ಕದವರು ಊಟ
ಕೊಡ್ತಾರಮ್ಮಾ...!
ಗೆಳೆಯರೇ ನಮ್ಮ ಆಹಾರದಲ್ಲಿ ಬಡವರ ಪಾಲೂ ಇದೆ.
ಬಡವರಿಗೆ ಸಹಾಯ ಮಾಡುವುದರಲ್ಲಿಯೂ ಸಂತೋಷವಿದೆ.

Monday, August 07, 2017

ರಾಖಿ ಹಬ್ಬ ದ ಶುಭಾಶಯಗಳು

ರಕ್ತ ಸಂಬಂಧಗಳ‌ ಅನುಬಂಧ
ರಕ್ಷೆ ಕಟ್ಟುವ ದಿನವಿದು
ಒಡ ಹುಟ್ಟದಿದ್ದರೆ ಏನಂತೆ
ಒಡ ಹುಟ್ಟಿದವರಾಗೆ ಇದ್ದಂತೆ
.
ಕಷ್ಟಗಳು ಬಂದಾಗ ಸಾಂತ್ವನ ಹೇಳುವ ಸಹೋದರ- ಸಹೋದರಿಯರು
.
ನೋವು-ನಲಿವನ್ನು ಆರ್ಥ ಮಾಡಿಕೊಂಡವರು
.
ಅಣ್ಣ-ತಂಗಿಯ ಭಾವನೆ ಬೇಸೆದವರು
.
ಮನೆ ಮನದಲ್ಲೂ ಬೆಳೆಯುವ ರಕ್ತ-ಸಂಬಂದ ಬೇಸೆಯುವ ಈ ಬಂಧವೇ"ರಕ್ಷಾ ಬಂಧನ

Thursday, August 03, 2017

8ನೇ ತರಗತಿಯವರೆಗಿದ್ದ ಪಾಸಿಂಗ್ ನಿಯಮ ಬದಲಿಸಿದ ಸರ್ಕಾರ

ಒಂದನೇ ತರಗತಿಯಿಂದ 8ನೇ ತರಗತಿಯವರೆಗೆ ಓದದೇ ಹೋದ್ರು ಮಕ್ಕಳು ಪಾಸ್ ಆಗ್ತಾರೆ ಅಂತಾ ನಿಶ್ಚಿಂತೆಯಿದ್ದಿದ್ದ ಪಾಲಕರು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ. ನಿಮ್ಮ ಮಕ್ಕಳೂ 5 ರಿಂದ 8ನೇ ತರಗತಿ ಮಧ್ಯೆ ಓದುತ್ತಿದ್ದರೆ ಮಕ್ಕಳ ಅಭ್ಯಾಸದ ಬಗ್ಗೆ ಗಮನ ನೀಡುವ ಅವಶ್ಯಕತೆಯಿದೆ. ಯಾಕೆಂದ್ರೆ ಓದದ ಮಕ್ಕಳು ಮುಂದಿನ ಕ್ಲಾಸ್ ಗೆ ಹೋಗಲ್ಲ. ಪಾಸಿಂಗ್ ನಿಯಮ ಬದಲಾಗಿದೆ.ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶಾಲೆಗಳಲ್ಲಿ ಫೇಲ್ ಮಾಡದ ನಿಯಮವನ್ನು ರದ್ದು ಮಾಡಲಾಗಿದೆ. ಕಡ್ಡಾಯ ಶಿಕ್ಷಣ ಹಕ್ಕು ಮಸೂದೆಗೆ ತಿದ್ದುಪಡಿ ತರಲಾಗ್ತಿದೆ. ಈ ತಿದ್ದುಪಡಿಯಡಿ ರಾಜ್ಯಗಳಲ್ಲಿ 5-8ನೇ ತರಗತಿಯೊಳಗಿನ ಮಕ್ಕಳನ್ನು ಪಾಸ್ ಮಾಡುವ ನಿಯಮ ಇನ್ಮುಂದೆ ಇರೋದಿಲ್ಲ. ಮಕ್ಕಳಿಗೆ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ಸಿಗಲಿದೆ.ಮಾರ್ಚ್ ಒಳಗೆ 8ನೇ ತರಗತಿಯೊಳಗಿನ ಮಕ್ಕಳಿಗೆ ಪರೀಕ್ಷೆ ನಡೆಯುತ್ತದೆ.

ಫೇಲ್ ಆದ ಮಕ್ಕಳಿಗೆ ಮೇನಲ್ಲಿ ಮತ್ತೆ ಪರೀಕ್ಷೆ ನಡೆಯುತ್ತದೆ. ಆದ್ರೆ ಎರಡೂ ಪರೀಕ್ಷೆಯಲ್ಲಿ ಫೇಲ್ ಆದ ಮಕ್ಕಳು ಅದೇ ತರಗತಿಯಲ್ಲಿ ಮುಂದುವರೆಯಲಿದ್ದಾರೆ. ಮಕ್ಕಳಿಗೆ ಮೂಲ ಶಿಕ್ಷಣ ನೀಡಲು ಹಾಗೂ ಪರೀಕ್ಷೆ ಒತ್ತಡ ಕಡಿಮೆ ಮಾಡಲು ಹಿಂದೆ ಪಾಸಿಂಗ್ ನಿಯಮ ಜಾರಿಗೆ ತರಲಾಗಿತ್ತು. ಈಗ ಐದನೇ ತರಗತಿಯಿಂದ 8ನೇ ತರಗತಿ ಮಕ್ಕಳಿಗೆ ಪಾಸಿಂಗ್ ನಿಯಮವಿರುವುದಿಲ್ಲ.ಇದಕ್ಕೆ 25 ರಾಜ್ಯಗಳು ಈಗಾಗಲೇ ಒಪ್ಪಿಗೆ ನೀಡಿವೆ. ಇದು ರಾಜಕೀಯ ಅಜೆಂಡಾ ಅಲ್ಲ, ರಾಷ್ಟ್ರೀಯ ಅಜೆಂಡಾ ಎಂದು ಶಿಕ್ಷಣ ಮಂತ್ರಿಗಳು ಹೇಳಿದ್ದಾರೆ.