Wikipedia

Search results

Saturday, June 18, 2016

ಪ್ರಶ್ನೋತ್ತರಗಳು

1. ದಲೈ ಲಾಮ ಟಿಬೆಟ್ ನ ಎಷ್ಟನೇ ಧರ್ಮ ಗುರು??
🚀14ನೇ ಧರ್ಮ ಗುರು.

2. ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಕ್ರಮಗಳಿಗೆ ಜೂನ್ 25 ರಂದು ಪ್ರಧಾನಿ ಮೋದಿಯವರು ಎಲ್ಲಿ ಉದ್ಘಾಟಿಸಲಿದ್ದಾರೆ ??
🚀 ಮಹಾರಾಷ್ಟ್ರದ ಪುಣೆಯಲ್ಲಿ .

3. ಪರಮಾಣು ಪೂರೈಕೆದಾರರ ಸಮೂಹ(ಎನ್ಎಸ್ ಜಿ)ದ ಸರ್ವಸದಸ್ಯರ ಸಂಖ್ಯೆ? ?
🚀48

4. ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ದಕ್ಷಿಣ ಅಮೆರಿಕಾ ಖಂಡದ ನಗರ ಯಾವುದು??
🚀 ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ದಕ್ಷಿಣ ಅಮೆರಿಕಾ ಖಂಡದ ವೆನೆಜುವೆಲಾದಲ್ಲಿ ಆಹಾರದ ಅಭಾವ ಉಂಟಾಗಿದೆ. ಹಾಗಾಗಿ ಸಾವಿರಾರು ಜನರು ಆಹಾರ ಪದಾರ್ಥಗಳ ಲೂಟಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

5. ಭಾರತದ ಯುವ ತಂತ್ರಜ್ಞರ ತಂಡ  ಅಭಿವೃದ್ಧಿಪಡಿಸಿರುವ ಪ್ರಥಮ ಸ್ವದೇಶಿ ನಿರ್ಮಿತ ತರಬೇತಿ ವಿಮಾನ??
🚀  ‘ಹಿಂದುಸ್ಥಾನ್‌ ಟರ್ಬೋ ಟ್ರೈನರ್‌– 40’ ಎಚ್‌ಎಎಲ್‌ನ ಈ ಪ್ರಯತ್ನ ಭಾರತ ಸರ್ಕಾರದ ‘ಮೇಕ್‌ ಇನ್‌ ಇಂಡಿಯಾ’ ಪ್ರಯತ್ನಕ್ಕೆ ಒತ್ತು ನೀಡಿದಂತಾಗಿದೆ.  ಎಚ್‌ಟಿಟಿ–40 ಬಳಕೆ ಮಾಡಿರುವ ಉಪಕರಣಗಳು ಪೈಕಿ ಶೇ 80 ದೇಶೀಯ ಮೂಲದ್ದು. ಶೇ 50 ರಷ್ಟು ಸಾಧನಗಳನ್ನು ಸ್ಥಳೀಯ ಖಾಸಗಿ ಕಂಪನಿಗಳೇ ತಯಾರಿಸಿದ್ದು.

6. 1857ರ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರ ಮಹಿಳೆ??
🚀ಜಾನ್ಸಿರಾಣಿ ಲಕ್ಷ್ಮಿ ಭಾಯಿ.

7.  ಕನ್ನಡದ "ತಿಥಿ' ಸಿನಿಮಾ ಚೀನಾದ ಪ್ರತಿಷ್ಠಿತ 19ನೇ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎಷ್ಟು  ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.? ?
🚀 ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಲವು ವಿಭಾಗಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಕನ್ನಡದ "ತಿಥಿ' ಸಿನಿಮಾ, ಇದೀಗ ಚೀನಾದ ಪ್ರತಿಷ್ಠಿತ 19ನೇ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

8. ದೇಶದ ಮೊದಲ ಮಹಿಳಾ ಫೈಟರ್‌ ಪೈಲಟ್‌ಗಳೆಂಬ ಖ್ಯಾತಿ ಪಡೆದವರು? ?
🚀 ಮಧ್ಯಪ್ರದೇಶದ ಅವನಿ ಚತುರ್ವೇದಿ, ರಾಜಸ್ಥಾನದ ಮೋಹನ ಸಿಂಗ್‌ ಹಾಗೂ ಬಿಹಾರದ ಭಾವನಾ ಕಾಂತ್‌ ವಾಯು ಪಡೆಯ ಯುದ್ಧ ವಿಮಾನದ ಪೈಲಟ್‌ಗಳಾಗಿ ಸೇರ್ಪಡೆಗೊಂಡವರು. ದೇಶದ ಮೊದಲ ಮಹಿಳಾ ಫೈಟರ್‌ ಪೈಲಟ್‌ಗಳೆಂಬ ಖ್ಯಾತಿ ಇವರದ್ದು.

9. ಜೂ.22 ರಂದು ಶ್ರೀಹರಿ ಕೋಟಾದಿಂದ   ಎಷ್ಟು  ಉಪಗ್ರಹಗಳು ಉಡಾವಣೆಯಾಗಲಿವೆ.??
🚀 ಜೂ.22 ರಂದು ಶ್ರೀಹರಿ ಕೋಟಾದಿಂದ 20 ಉಪಗ್ರಹಗಳು  ಉಡಾವಣೆಯಾಗಲಿವೆ. 20 ಉಪಗ್ರಹಗಳ ಪೈಕಿ ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷಿಯಾದ ಉಪಗ್ರಹಗಳು ಇವೆ

10.    ಎಷ್ಟನೇ ವರ್ಷದಲ್ಲಿ  ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿತ್ತು? ?
🚀 . 2011ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿತ್ತು.

೧. ಜೈನರ ಕಾಶಿ ಎಂದು ಕರ್ನಾಟಕದ ಯಾವ ಊರನ್ನು ಕರೆಯುತ್ತಾರೆ?
ಉತ್ತರ: ಮೂಡಬಿದಿರೆ.

೨. ಕರ್ನಾಟಕದ ಪ್ರಸಿದ್ಧಿ 'ಬಿದರಿ ಕಲೆ'ಯ ತವರು?
ಉ: ಇರಾನ್

೩. ಭಾರತೀಯ ನಾಯಿ ತಳಿಯೊಂದರ ಹೆಸರು  ಕರ್ನಾಟಕದ ಯಾವ ಸ್ಥಳದ ಹೆಸರಿನೊಂದಿಗೆ  ಹಂಚಿಕೊಂಡಿದೆ?
ಉ: ಮುಧೋಳ್

೪. ಮೂಡಿಗೆರೆಯಲ್ಲಿರುವ 'ನಿರುತ್ತರ' ಎಂಬುದು ಯಾವ ಸಾಹಿತಿಯ ಮನೆಯ ಹೆಸರಾಗಿದೆ?
ಉ: ಪೂರ್ಣಚಂದ್ರ ತೇಜಸ್ವಿ

೫. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಲೇಖಕಿ?
ಉ: ಡಾ. ಅನುಪಮಾ ನಿರಂಜನ

೬. ಕನ್ನಡದ ಮೊದಲ ಕಾನೂನು ಪತ್ರಿಕೆ?
ಉ: ನ್ಯಾಯ ಸಂಗ್ರಹ

೭. ಅಮೇರಿಕಾದ ರಾಷ್ಟ್ರಾಧ್ಯಕ್ಷರ ಪದಕ ಪಡೆದ ಕನ್ನಡದ ಮೊಟ್ಟಮೊದಲ ವಿಜ್ಞಾನಿ?
ಉ: ಡಾ. ಶಿವ ಸುಬ್ರಹ್ಮಣ್ಯಂ

೮. ಚಂದ್ರಲೋಕಕ್ಕೆ ಪಾದಾರ್ಪಣೆ ಮಾಡಿದ ಪ್ರಥಮ ಕನ್ನಡಿಗ?
ಉ: ಚಂದ್ರಶೇಖರ ಶರ್ಮ

೯. ರಾಷ್ಟ್ರಪತಿಗಳ ಸ್ವರ್ಣಪದಕ ಗಳಿಸಿದ ಮೊಟ್ಟಮೊದಲ ಕನ್ನಡ ಚಿತ್ರ?
ಉ: ಸಂಸ್ಕಾರ

೧೦. 'ಸೀಮಾಪುರುಷ' ಎಂಬ ಬಿರುದನ್ನು ಹೊಂದಿರುವ ಕವಿ?
ಉ: ನೇಮಿಚಂದ್ರ

ಎಂಪ್ಲೋಯಿಮೆಂಟ್ ಪ್ರೋವಿಡೆಂಟ್ ಫಂಡ್ ಆರ್ಗನೈಸೇಷನ್ನಲ್ಲಿ 257 ವಿವಿಧ ಹುದ್ದೆಗಳ ಭರ್ತಿ.

ಕೇಂದ್ರ ಲೋಕಸೇವಾ ಆಯೋಗ ಎಂಪ್ಲೋಯಿಮೆಂಟ್ ಪ್ರೋವಿಡೆಂಟ್ ಫಂಡ್ ಆರ್ಗನೈಸೇಷನ್ನಲ್ಲಿ ಎನ್ಫೋರ್ಸ್ಮೆಂಟ್ ಆಫೀಸರ್ಸ್ / ಅಕೌಂಟ್ಸ್ ಆಫೀಸರ್ಸ್ ಹುದ್ದೆಗಳು ಸೇರಿದಂತೆ 257 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ : ಜೂನ್ 23, 2016
ವೇತನ ಶ್ರೇಣಿ : 9,300 ರಿಂದ 34,800.
ಒಟ್ಟು ಹುದ್ದೆಗಳು - 257 (30, ಎಸ್ಟಿ 6, ಒಬಿಸಿ 84 ಮತ್ತು 21 ಹುದ್ದೆಗಳು ವಿಕಲ ಚೇತನರಿಗೆ ಮೀಸಲು.)

ಅರ್ಜಿ ಸಲ್ಲಿಸಲು ವಯೋಮಿತಿ : 30 ವರ್ಷಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ತರಬೇತಿ ಅವಧಿಯಾಗಿರುತ್ತದೆ. ಅಭ್ಯರ್ಥಿಗಳನ್ನು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಿಗೆ ನೇಮಕ ಮಾಡಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ : www.epfindia.com