ಪ್ರಶ್ನೋತ್ತರಗಳು
1. ದಲೈ ಲಾಮ ಟಿಬೆಟ್ ನ ಎಷ್ಟನೇ ಧರ್ಮ ಗುರು??
🚀14ನೇ ಧರ್ಮ ಗುರು.
2. ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಕ್ರಮಗಳಿಗೆ ಜೂನ್ 25 ರಂದು ಪ್ರಧಾನಿ ಮೋದಿಯವರು ಎಲ್ಲಿ ಉದ್ಘಾಟಿಸಲಿದ್ದಾರೆ ??
🚀 ಮಹಾರಾಷ್ಟ್ರದ ಪುಣೆಯಲ್ಲಿ .
3. ಪರಮಾಣು ಪೂರೈಕೆದಾರರ ಸಮೂಹ(ಎನ್ಎಸ್ ಜಿ)ದ ಸರ್ವಸದಸ್ಯರ ಸಂಖ್ಯೆ? ?
🚀48
4. ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ದಕ್ಷಿಣ ಅಮೆರಿಕಾ ಖಂಡದ ನಗರ ಯಾವುದು??
🚀 ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ದಕ್ಷಿಣ ಅಮೆರಿಕಾ ಖಂಡದ ವೆನೆಜುವೆಲಾದಲ್ಲಿ ಆಹಾರದ ಅಭಾವ ಉಂಟಾಗಿದೆ. ಹಾಗಾಗಿ ಸಾವಿರಾರು ಜನರು ಆಹಾರ ಪದಾರ್ಥಗಳ ಲೂಟಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
5. ಭಾರತದ ಯುವ ತಂತ್ರಜ್ಞರ ತಂಡ ಅಭಿವೃದ್ಧಿಪಡಿಸಿರುವ ಪ್ರಥಮ ಸ್ವದೇಶಿ ನಿರ್ಮಿತ ತರಬೇತಿ ವಿಮಾನ??
🚀 ‘ಹಿಂದುಸ್ಥಾನ್ ಟರ್ಬೋ ಟ್ರೈನರ್– 40’ ಎಚ್ಎಎಲ್ನ ಈ ಪ್ರಯತ್ನ ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಪ್ರಯತ್ನಕ್ಕೆ ಒತ್ತು ನೀಡಿದಂತಾಗಿದೆ. ಎಚ್ಟಿಟಿ–40 ಬಳಕೆ ಮಾಡಿರುವ ಉಪಕರಣಗಳು ಪೈಕಿ ಶೇ 80 ದೇಶೀಯ ಮೂಲದ್ದು. ಶೇ 50 ರಷ್ಟು ಸಾಧನಗಳನ್ನು ಸ್ಥಳೀಯ ಖಾಸಗಿ ಕಂಪನಿಗಳೇ ತಯಾರಿಸಿದ್ದು.
6. 1857ರ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರ ಮಹಿಳೆ??
🚀ಜಾನ್ಸಿರಾಣಿ ಲಕ್ಷ್ಮಿ ಭಾಯಿ.
7. ಕನ್ನಡದ "ತಿಥಿ' ಸಿನಿಮಾ ಚೀನಾದ ಪ್ರತಿಷ್ಠಿತ 19ನೇ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.? ?
🚀 ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಲವು ವಿಭಾಗಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಕನ್ನಡದ "ತಿಥಿ' ಸಿನಿಮಾ, ಇದೀಗ ಚೀನಾದ ಪ್ರತಿಷ್ಠಿತ 19ನೇ ಶಾಂಘೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
8. ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ಗಳೆಂಬ ಖ್ಯಾತಿ ಪಡೆದವರು? ?
🚀 ಮಧ್ಯಪ್ರದೇಶದ ಅವನಿ ಚತುರ್ವೇದಿ, ರಾಜಸ್ಥಾನದ ಮೋಹನ ಸಿಂಗ್ ಹಾಗೂ ಬಿಹಾರದ ಭಾವನಾ ಕಾಂತ್ ವಾಯು ಪಡೆಯ ಯುದ್ಧ ವಿಮಾನದ ಪೈಲಟ್ಗಳಾಗಿ ಸೇರ್ಪಡೆಗೊಂಡವರು. ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ಗಳೆಂಬ ಖ್ಯಾತಿ ಇವರದ್ದು.
9. ಜೂ.22 ರಂದು ಶ್ರೀಹರಿ ಕೋಟಾದಿಂದ ಎಷ್ಟು ಉಪಗ್ರಹಗಳು ಉಡಾವಣೆಯಾಗಲಿವೆ.??
🚀 ಜೂ.22 ರಂದು ಶ್ರೀಹರಿ ಕೋಟಾದಿಂದ 20 ಉಪಗ್ರಹಗಳು ಉಡಾವಣೆಯಾಗಲಿವೆ. 20 ಉಪಗ್ರಹಗಳ ಪೈಕಿ ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷಿಯಾದ ಉಪಗ್ರಹಗಳು ಇವೆ
10. ಎಷ್ಟನೇ ವರ್ಷದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿತ್ತು? ?
🚀 . 2011ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿತ್ತು.