ಚೆನ್ನೈ: ರಿಲಯನ್ಸ್ ಜಿಯೋ ಸೇವೆಯ ಬಳಿಕ ಈಗ ದರ ಸಮರ ಮತ್ತೆ ಆರಂಭವಾಗಿದ್ದು, ಬಿಎಎಸ್ಎನ್ಎಲ್ ಈಗ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆಗಳ ಆಫರ್ ಪ್ರಕಟಿಸಿದೆ.
144 ರೂ. ರಿಚಾರ್ಜ್ ಮಾಡಿದರೆ ಸ್ಥಳೀಯ ಮತ್ತು ಎಸ್ಟಿಡಿ ಕರೆ ಗಳನ್ನು ಉಚಿತವಾಗಿ ಮಾಡಬಹುದು ಎಂದು ಬಿಎಸ್ಎನ್ಎಲ್ ಹೇಳಿದೆ.
ಹೊಸ ಆಫರ್ 6 ತಿಂಗಳವರೆಗೆ ಲಭ್ಯವಿದ್ದು, ತಿಂಗಳಿಗೆ 300 ಎಂಬಿ ಡೇಟಾ ಕೂಡ ಉಚಿತವಾಗಿ ಸಿಗಲಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಈ ಕೊಡುಗೆ ಬಳಸಬಹುದು ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.
ದೇಶದಲ್ಲಿ ಈಗ 4,400 ವೈಫೈ ಹಾಟ್ಸ್ಪಾಟ್ ಆರಂಭಿಸಿದ್ದೇವೆ, ಮುಂದಿನ ಒಂದು ವರ್ಷದಲ್ಲಿ ಒಟ್ಟು 40 ಸಾವಿರ ವೈಫೈ ಹಾಟ್ಸ್ಪಾಟ್ ಆರಂಭಿಸುವ ಗುರಿಯನ್ನು ಹಾಕಿದ್ದೇವೆ ಎಂದು ಅವರು ಹೇಳಿದರು.