Wikipedia

Search results

Saturday, July 01, 2017

GST: ಯಾವುದಕ್ಕೆ ಎಷ್ಟು ತೆರಿಗೆ ಗೊತ್ತಾ..?

ದೇಶಾದ್ಯಂತ ಇಂದಿನಿಂದ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಗೆ ಬಂದಿದೆ. ದಿನಬಳಕೆಯ ಸಾಕಷ್ಟು ಪದಾರ್ಥಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಇವುಗಳಿಗೆ ತೆರಿಗೆ ಇಲ್ಲ:

ಪ್ಯಾಕ್ ಮಾಡದ ಆಹಾರ ಧಾನ್ಯ, ತಾಜಾ ತರಕಾರಿ, ಬ್ರ್ಯಾಂಡ್ ರಹಿತ ಗೋಧಿ ಹಿಟ್ಟು, ಬ್ರ್ಯಾಂಡ್ ರಹಿತ ಮೈದಾ, ಬ್ರ್ಯಾಂಡ್ ರಹಿತ ಕಡ್ಲೆ ಹಿಟ್ಟು, ಬೆಲ್ಲ, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪ್ಯಾಕ್ ಮಾಡದ ಪನೀರ್, ಬ್ರ್ಯಾಂಡ್ ರಹಿತ ಪ್ರಾಕೃತಿಕ ಜೇನು, ಮಕ್ಕಳ ಡ್ರಾಯಿಂಗ್ ಬಣ್ಣದ ಪುಸ್ತಕಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆ.

ಜಿ.ಎಸ್.ಟಿ. ಶೇ.5 ರಷ್ಟು ತೆರಿಗೆ:

ಸಕ್ಕರೆ, ಚಹಾ, ಹುರಿದ ಕಾಫಿ ಬೀಜ, ಖಾದ್ಯ ತೈಲಗಳು, ಸ್ಕಿಮ್ಡ್ ಹಾಲಿನ ಪೌಡರ್, ಶಿಶುಗಳ ಹಾಲಿನ ಆಹಾರ, ಪ್ಯಾಕ್ ಮಾಡಿದ ಪನೀರ್, ಗೋಡಂಬಿ, ಒಣ ದ್ರಾಕ್ಷಿ, ಪಡಿತರ ಸೀಮೆಎಣ್ಣೆ, ಮನೆ ಬಳಕೆ ಎಲ್.ಪಿ.ಜಿ., 500 ರೂ. ವರೆಗಿನ ಪಾದರಕ್ಷೆ, 1000ರೂ.ವರೆಗಿನ ರೆಡಿಮೇಡ್ ಬಟ್ಟೆ, ಅಗರಬತ್ತಿ,

ಜಿ.ಎಸ್.ಟಿ. ಶೇ. 12 ರಷ್ಟು ತೆರಿಗೆ:

ಬೆಣ್ಣೆ, ತುಪ್ಪ, ಬಾದಾಮಿ, ಹಣ್ಣಿನ ರಸ, ಜಾಮ್, ಛತ್ರಿ, ಮೊಬೈಲ್, ಪ್ಯಾಕ್ ಮಾಡಿದ ಎಳನೀರು ಮೊದಲಾದವು.

ಜಿ.ಎಸ್.ಟಿ. ಶೇ. 18 ರಷ್ಟು ತೆರಿಗೆ:ಕೇಶತೈಲ, ಟೂತ್ ಪೇಸ್ಟ್, ಸಾಬೂನು, ಪಾಸ್ತಾ, ಕಾರ್ನ್ ಪ್ಲೇಕ್ಸ್, ಸೂಪ್ಸ್, ಐಸ್ ಕ್ರೀಂ, ಕಂಪ್ಯೂಟರ್, ಪ್ರಿಂಟರ್ ಮೊದಲಾದವು.